ನಮಸ್ಕಾರ ಗೆಳೆಯರೇ,
ಕನ್ನಡ ಕನ್ನಡದ ಬಗ್ಗೆ ಕನ್ನಡಿಗರೇ ಅಸಡ್ಡೆ ತೋರಿದಲ್ಲಿ ಕನ್ನಡಕ್ಕೆ ಉಳಿಗಾಲವೆಲ್ಲಿ...? ಯಾರಿಗಾದರು ನೋವಾದರೂ ಪರವಾಗಿಲ್ಲ, ಇದೊಂದು ಆತಂಕಕಾರಿ ಬೆಳವಣಿಗೆ ಎಂದು ನಾನು ಸುಮ್ಮನೆ ಕೂತಿಲ್ಲ. ಸುಮಾರು 2 ವರ್ಷಗಳ ಕೆಳಗೆ ಪರಿಚಯವಾದ ಒಬ್ಬಳು ಗೆಳತಿ (ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆವು) ಅಚ್ಚ ಕನ್ನಡತಿ ನಾನು ಅವರೊಂದಿಗೆ ತುಂಬಾ ಆತ್ಮೀಯತೆಯಿಂದ ಇದ್ದೆ, ನಮ್ಮದು ಕೇವಲ ಸ್ನೇಹವಷ್ಟೇ, ಆದರೆ ನಮ್ಮ ತಂಡದಲ್ಲಿ ಎಲ್ಲರು ಕನ್ನಡಿಗರೇ ಇದ್ದೆವು ಕಾರಣ ನಾನೇ ಆ ತಂಡದ ಸಾರಥಿ (ನಾಯಕ), ಏನೇ ಇದ್ದರು ನಾವೆಲ್ಲರೂ ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದೆವು, ಕಾಲಕ್ರಮೇಣ ನಾನು ಯಂತ್ರಾಂಶದಿಂದ ತಂತ್ರಾಂಶದ ಕಡೆಗೆ ನನ್ನ ಕೆಲಸವನ್ನು ಬದಲಾಯಿಸಿಕೊಂಡೆ. ಇದು ನಡೆದು ಸುಮಾರು 10 ತಿಂಗಳುಗಳಾಗಿವೆ, ಈಗ ನೋಡಿದರೆ ಕನ್ನಡಿಗರೇ ಕನ್ನಡ ಮಾತಾನಾಡುವುದು ಕಷ್ಟ, ಎಲ್ಲರು ತಮಿಳು ಮತ್ತು ತೆಲುಗನ್ನು ಮಾತನಾಡುತ್ತಿದ್ದಾರೆ, ನನಗೆ ತುಂಬಾ ನೋವಾಯಿತು, ಅಲ್ಲಿದ್ದ ನನ್ನ ಕನ್ನಡದ ಗೆಳತಿಗೆ ಹೀಗೆಂದೇ ಅವಳು ಅದನ್ನು ನೇರವಾಗಿ ಅಲ್ಲಿದ್ದ ಕನ್ನಡಿಗರಿಗೆಲ್ಲ ಒಂದೇಮಾತಿನಲ್ಲಿ ಯಾರದೋ ಹಿತಕ್ಕಾಗಿ ತಮ್ಮ ತಾಯಿಯ ತಲೆ ಹಿಡಿಯಬೇಡಿ (ಅನ್ಯ ಭಾಷಿಗರಿಗಾಗಿ ಕನ್ನಡದ ಕೊಲೆ ಮಾಡಬೇಡಿ). ಎಂದು, ಕೇವಲ ಒಂದೇ ಮಾತಿಗೆ ಎಷ್ಟೊಂದು ಬದಲಾವಣೆ ಎಂದರೆ ಕೇವಲ ಒಂದು ವಾರದಲ್ಲಿ ಅನ್ಯ ಭಾಷಿಗರು ಸಹ ಕನ್ನಡ ಕಲಿಯಲು ಪ್ರಯತ್ನ ಮಾಡುತ್ತಿದ್ದಾರೆ.
ಕನ್ನಡ ಎನ್ನುವ ಅಭಿಮಾನ ಮನಸಲ್ಲಿ ಇದ್ದರೆ ಸಾಲದು ಅದನ್ನು ಅನ್ಯಭಾಷಿಗರಲ್ಲಿ ಹಂಚಿಕೊಂಡರೆ ಮಾತ್ರ ನಮ್ಮ ಭಾಷೆ ಉಳಿಯಲು ಬೆಳೆಯಲು ಸಾಧ್ಯ.
- ದೊಡ್ದೆ ಗೌಡ
ಒರಿಸ್ಸಾದವನ ಕನ್ನಡ ಪ್ರೇಮ.
ನನ್ನ ಗೆಳೆಯ ಮಿಶ್ರ ಸುಮಾರು 10 ವರ್ಷ ಕರ್ನಾಟಕದಲ್ಲಿ ಕೆಲಸ ಮಾಡಿ ಕನ್ನಡದ ಅಭಿಮಾನಿಯಾದವನು ಆ ಪರಿ ಹೇಗಿತ್ತು ಎಂದರೆ, ಅವನು ನಂತರ ಕೊಲ್ಕತ್ತಾಗೆ ಸ್ಥಳಾಂತರವಾದರೂ ಅವನ ಸಂಚಾರಿ ದೂರವಾಣಿಯ ಕರೆಘಂಟೆ "ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಈಗಲೂ ಅವನು ನಮ್ಮೊಂದಿಗೆ ವ್ಯವಹರಿಸುವಾಗ ಕನ್ನಡದಲ್ಲಿಯೇ ವ್ಯವಹರಿಸುತ್ತಾನೆ.
ಕನ್ನಡವನ್ನು ಕನ್ನಡಿಗರೇ ಉಳಿಸಬೇಕು ಹೊರತು ದೆಹಲಿಯ ಶಾನುಭೋಗನಲ್ಲ..... ಅನ್ನೋ ಸತ್ಯನ ಎಲ್ಲರು ಅರ್ಥ ಮಾಡಿಕೊಳ್ಳಬೇಕು..... ಪರ ಭಾಷಿಗರಿಗೂ ಕನ್ನಡ ಕಲಿಯಲು ಇಚ್ಛೆಇರುತ್ತದೆ.... ಆದರೆ ಕನ್ನಡಿಗರು ಬಹಳ ಬುದ್ದಿವಂತರು ಅವರಿಗೆ ಕನ್ನಡ ಕಲಿಯುವ ಅವಕಾಶವನ್ನೇ ಕೊಡುವುದಿಲ್ಲ......
ಕನ್ನಡ ಕಲಿಯದ ಕನ್ನಡೇತರರಿಗೆ ಕನ್ನಡ ಭಾಷೆ, ಕರ್ನಾಟಕ ಮತ್ತು ಕನ್ನಡಿಗರು ಹೀಗೆಲ್ಲ ಅಭಿಮಾನ ಬೆಳೆಯಲು ಹೇಗೆ ಸಾಧ್ಯ?
ಯೋಚಿಸಿ ಕನ್ನಡಿಗರೇ ಇಂದೇ "ಕನ್ನಡ ಭಾಷೆ, ಕರ್ನಾಟಕ ಮತ್ತು ಕನ್ನಡಿಗರ"ಉಳಿವಿಗಾಗಿ ಪಣತೊಡಿ....
- ಇಂತಿ ನಿಮ್ಮ ಗೆಳೆಯ
ಮಂಜುನಾಥ ಗೌಡ



No comments:
Post a Comment