Sunday, 25 November 2012

ಮಾಹಿತಿ ಮತ್ತು ತಂತ್ರಜ್ಙಾನ ಪ್ರತಿಯೊಬ್ಬ ಕನ್ನಡಿಗರಿಗು ತಲುಪಿಸುವ ಉದ್ದೇಶವೇ ಹೊರತು ಮತ್ತೇನು ಅಲ್ಲ.



ಪ್ರಿಯ, ಸ್ವಾಭಿಮಾನಿ ಕನ್ನಡಿಗರೇ.

ಮಾಹಿತಿ ಮತ್ತು ತಂತ್ರಜ್ಙಾನ ಪ್ರತಿಯೊಬ್ಬ ಕನ್ನಡಿಗರಿಗು ತಲುಪಿಸುವ ಉದ್ದೇಶವೇ ಹೊರತು ಮತ್ತೇನು ಅಲ್ಲ.

ಇಂತಹ ಮಾಹಿತಿಯನ್ನು ಕೇಳಿರುವುದು ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯೆಡ್ಡ್ಯುರಪ್ಪನವರು. ಇದಕ್ಕೆ ನನ್ನ ಅಭಿಪ್ರಾಯವನ್ನು ತಿಳಿಸಿಸಲು ಹೀಗೋಂದು ಪತ್ರ ತಯಾರಿಸಿದ್ದೆನೆ. ನಾವೆಲ್ಲ ಸೇರಿ ಇದರ ಬಗ್ಗೆ ಚರ್ಚಿಸಿ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷದ ರಾಜ್ಯಾದ್ಯಕ್ಷರು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ ಹಾಗೂ ಎಲ್ಲಾ ಕನ್ನಡ ವಾರ್ತಾ ಮಾಧ್ಯಮಗಳಿಗು, ಅತಿ ಹೆಚ್ಚು ಪ್ರಭಾವ ಬೀರಿರುವ ಕನ್ನಡ ಪರ ಸಂಘಟನೆಗಳಿಗು ತಲುಪಿಸೋಣ, ಯಾರೇ ಅಧಿಕಾರಕ್ಕೆ ಬಂದರು ಕಾರ್ಯಗಳನ್ನು ತಪ್ಪದೇ ಮಾಡಬೇಕು.


ಇದರ ಬಗ್ಗೆ ಅದಷ್ಟು ಬೇಗ ಚರ್ಚಿಸೋಣ.

ಚರ್ಚೆಗೆ ಸಿದ್ದರಿರುವ ಕನ್ನಡಿಗರು ದಯಟ್ಟು ನಿಮ್ಮ ಅಭಿಪ್ರಾಯಗಳನ್ನು ಮತ್ತು ಮಾಹಿತಿಗಳನ್ನು ಕೇಳಗಿನ ಬ್ಲಾಗ್-ನಲ್ಲಿ ಹಂಚಿ ಕೋಳ್ಳಿ. ಮತ್ತು ತಪ್ಪದೇ ಪ್ರತಿ ದಿನ ಬ್ಲಾಗನ್ನು (http://manju-abhi.blogspot.in/)ನೋಡಿ ಸುಮಾರು ೨೫ ಜನ ಕನ್ನಡಿಗರು ಮಾಹಿತಿ ಹಂಚಿ ಕೊಳ್ಳಲು ಸಿದ್ದರಾದಾಗ ಎಲ್ಲರು ಒಂದೆಡೆ ಸೇರಿ ಮಾಹಿತಿ ಸಿದ್ದಪಡಿಸಿ. ಮೆಲಿನಂತೆ ಎಲ್ಲರಿಗು ತಲುಪಿಸುವ ಪ್ರಯತ್ನ ಮಾಡೋಣ.


ನಮ್ಮ ಭಾರತದಲ್ಲಿ ಮಾಹಿತಿ ತಂತ್ರಜ್ಙಾನದ ಸಂಸ್ಥೆಗಳು ನಾಯಿಕೋಡೆಗಳಂತೆ ಎಲ್ಲೆಂದರಲ್ಲಿ ತಲೆಯೆತ್ತಿವೆ, ಅದರೆ ಅದಕ್ಕೆ ಬೇಕಾದ ಪೂರಕ ಯಾಂತ್ರಿಕ ತಂತ್ರಜ್ಙಾನ ಭಾರತದಲ್ಲಿ ಲಭ್ಯವಿಲ್ಲ..... ಇದೇ ಕಾರಣದಿಂದಾಗಿ ಚೈನಾ ಮತ್ತು ಕೊರಿಯ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿದೆ. ಉದ್ಯೋಗ ಸೃಸ್ಟಿಸಬೇಕಾದರೆ,
 
) ಮೊದಲು ಕರ್ನಾಟಕದ ಎಲ್ಲಾ ೩೧ ಜಿಲ್ಲೆಗಳಲ್ಲಿ "ಹಾರ್ಡ್ ವೇರ್" ಕಂಪನಿಗಳ ಸ್ಥಾಪನೆಯಾಗಬೇಕು, ಮತ್ತು ಅಲ್ಲಿನ ಎಲ್ಲಾ ಬಗೆಯ ಕೆಅನಲಸಗಳು ಅದೆ ಜಿಲ್ಲೆಯ ಜನಗಳಿಗೆ (ಅದರಲ್ಲೂ ಕನ್ನಡಿಗರಿಗೆ ಮಿಸಲಿಡಬೇಕು) ಇದರಿಂದ ಬೆಂಗಳೂರಿನ ಜನಸಂಖ್ಯೆ ನಿಯಂತ್ರಣದಲ್ಲಿರುತ್ತದೆ. ಮತ್ತು ವಾಹನ ದಟ್ಟಣೆ ಕೂಡ ಸುದಾರಿಸುತ್ತದೆ. ಗ್ರಾಮೀಣ ಪ್ರದೇಶದ ಆರ್ಥೀಕ ಪರಿಸ್ಥಿತಿಯು ಸುಧಾರಿಸುತ್ತದೆ.
 
) ನೀರಿನ ಸಮಸ್ಯೆಯನ್ನು ನೀಗಿಸಲು ಕರ್ನಾಟಕದ ಹಣೆಕಟ್ಟುಗಳಿಂದ ಬಿಟ್ಟ ನೀರು ಹೊರ ರಾಜ್ಯಕ್ಕೆ ತಲುಪುವ ಮೊದಲು ಇನ್ನು ಸಾಧ್ಯವಿರುವ ಸ್ಥಳದಲ್ಲಿ ನೀರಿನ ಶೇಖರಣೆ ಆಗಬೇಕು ಅದಕ್ಕಾಗಿ ಸಣ್ಣ ಪ್ರಮಾಣದ ಮಟ್ಟದಲ್ಲಿ ಹಣೆಕಟ್ಟುಗಳನ್ನು ನಿರ್ಮಾಣ ಮಾಡಬೇಕು. ಕರ್ನಾಟಕದ ಪ್ರತಿ ಹಳ್ಳಿಗಳಲ್ಲಿ ಬಿದ್ದ ಮಳೆನೀರು ಹರಿದ ಅಯಾ ಹಳ್ಳಿಗಳ ಕೆರೆಗಳಲ್ಲಿ ನೀರಿನ ಸಂಗ್ರಹಣೆ ಆಗಬೇಕು.


) ಕೃಷಿಕರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಹೇರಳವಾಗಿದೆ ಇದರಿಂದ ರೈತಾಪಿ ಜನರು ಉಳುವುದರಿಂದ ಹಿಡಿದು ಬಿತ್ತನೆ, ರಸಗೊಬ್ಬರ, ಕೀಟನಾಶಕ, ಕಳೆ ನಿರ್ಮೂಲನೆ, ಕೂಯ್ಲು ಮತ್ತು ಮಾರಟ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಹಾರಕ್ಕೆಂದು ಸಕಲ ಕೃಷಿ ಉಪಕರಣಗಳನ್ನು ಹೊಂದಿರುವ "ಟ್ರಾಕ್ಟರ್ ಟ್ರಿಲ್ಲರ್ ಮತ್ತು ಬೆಳೆ ಕುಯ್ಳು ಯಂತ್ರಗಳನ್ನು ಪ್ರತಿ ಗ್ರಾಮಕ್ಕೆ ಒಂದರಂತೆ ನೀಡಬೇಕು ಮತ್ತು ಅದರ ಎಲ್ಲಾ ಹಂತದ ರಿಪೇರಿ ಖರ್ಚುಗಳನ್ನು ಆಯ ಗ್ರಾಮದವರೇ ನೀಡಬೇಕು..


(ಇದು ಒಂದೆ ಬಾರಿಯ ಹೂಡಿಕೆ)



ಧನ್ಯವಾದಗಳು

 - ಮಂಜುನಾಥ.ಜಿ                  
ಸಂಚಾರಿ ದೂರವಾಣಿ:-7829697928


E-Mail manjuabhi@live.com
       manju.abhi2007@gmail.com
             


http://www.datapigtechnologies.com/ExcelMain.htm
http://www.orkut.co.in/Main#Profile.aspx?uid=6398769743411923966


ಕನ್ನಡಕೆ ಹೋರಾಡು ಕನ್ನಡದ ಕಂದ - ಕನ್ನಡವ ಕಾಪಾಡು ನನ್ನ ಆನಂದ.  
ಜೋಗುಳದ ಹರಕೆಯಿದು ಮರೆಯದಿರು ಚಿನ್ನ - ಮರೆತೆಯೆಂದರೆ ನೀ ಮರೆತಂತೆ ಕನ್ನಡಾಂಬೆಯನ್ನ
ಕನ್ನಡ ಎಂದರೆ ಬರಿ ನುಡಿಯಲ್ಲ ವೈವಿದ್ಯಮಯ ಅದರ ಅರ್ಥ  
ಕಾವೇರಿ ಎಂದರೆ ಬರಿ ಜಲವಲ್ಲ ಅದು ಪಾವನ ತೀರ್ಥ.

1 comment:

  1. Innodu hudike idara bagge.
    1. Namma raitaru belegalannu tamma swantha iche bandanthe beleyautare. Oorina atva halliya ella raitaru onde bele belayautare.. idarinda a bele jaste agi adara dara(rate) kadime aguta ide. A karana raitatige tamma belege olleya duddu siguvudilla. E karanadindagi raitara arthika paristiti kshinisutade. Mattu raita bele beleyalu nillisi pattana sirutane.
    Edara parihara - agriculture dept navaru ella riatarige inta inta( particular) bele beleyalu suchane madabeku. avaga ella belegalige olleya duddu barutade mattu artika stithi nivarisutade.

    ReplyDelete