Wednesday, 12 September 2012

ಸೀತಜ್ಜಯ್ಯನ ಮನದಾಳದ ಮಾತು.

ನಮಸ್ಕಾರ ಗೆಳೆಯರೇ, 

ಯಾವುದೋ ಒಂದು ಚಲನಚಿತ್ರದ ಸಂಭಾಷಣೆ ಹೀಗಿದೆ "Life is start with the Competation" ಯಾಕೋ ಗೊತ್ತಿಲ್ಲ, ಈ ಸಾಲು ನನ್ನ ಮನಸ್ಸನ್ನು ತುಂಬಾ ಯೋಚನೆಗೆ ದಾರಿ ಮಾಡಿತ್ತು, ಆದರೆ ಈ ಇಂತಹ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿದು, ೯೦ರ ಆಸು-ಪಾಸಿನ ಓರ್ವ ಅಜ್ಜನಿಂದ. 

                 ಅವರ ವಿವರಣೆ ಬಹಳ ಸರಳವಾಗಿತ್ತು. "ನಮ್ಮ ಜನನದ ಮುನ್ನ ಮರಣದ ನಿರ್ಣಯವಾಗಿರುತ್ತದೆ" ನಾವು ಅಂದುಕೊಳ್ಳೋದು ಜೀವಿಸುವ ಸಲುವಾಗಿ ಪ್ರತಿನಿತ್ಯ ಹೋರಾಟ ಮಾಡುತ್ತೀವಿ ಅಂತ, ಆದರೆ ನಾವು ಪ್ರತಿನಿತ್ಯ ಸಾವಿಗೆ ಹತ್ತಿರವಾಗುತ್ತಿದ್ದೇವೆ, 

ಗರ್ಭಾವಸ್ಥೆಯಲ್ಲಿ - ಅಂಡಾಣುಗಳ ವಿರುದ್ದ ಹೋರಾಟ. 
ವಿಧ್ಯಾಭ್ಯಾಸದಲ್ಲಿ - ಪರೀಕ್ಷೆಗಳ ವಿರುದ್ದ ಹೋರಾಟ. 
ಕೆಲಸಕ್ಕಾಗಿ - ಅವಕಾಶಗಳಿಗಾಗಿ ಹೋರಾಟ. 
ಜೀವನಕಾಗಿ - ದಿನನಿತ್ಯ ಅಗತ್ಯಗಳಿಗಾಗಿ ಹೋರಾಟ. 
ಮುಪ್ಪಿನಲ್ಲಿ - ಅನಾರೋಗ್ಯದ ವಿರುದ್ದ ಹೋರಾಟ. 
ಹೀಗೆ ಜನನದಿಂದ ಮರಣದವರೆಗೆ ಹೋರಾಟದ ಹಾದಿಯಲ್ಲಿ ನಡೆಯುವ ನಾವು ಏನನ್ನು ಸಾಧಿಸದೆ ಚಿಂತಿಸುತ್ತೇವೆ. 

      ಅಜ್ಜ ಹೇಳಿದ ಒಂದೊಳ್ಳೆ ಮಾತು : ಯಾಕ್ರಯ್ಯ ನೀವು ಬೆಂಗಳೂರಿನವರು ೬೦ರ ನಂತರ "ನನಗೆ ನೆಮ್ಮದಿ ಮತ್ತು ಆರೋಗ್ಯ ಬೇಕು" ಅಂತ ಯೋಚನೆ ಮಾಡ್ತಿರಾ? " ನನಗೆ ಅನ್ನೋ ಅಹಂ, ಬೇಕು ಅನ್ನೋ ದುರಾಸೆ" ಈ ಎರಡನ್ನು ಮೊದಲು ಬಿಡಿ, ನಿಮಗೆ "ನೆಮ್ಮದಿ ಮತ್ತು ಆರೋಗ್ಯ" ಎರಡು ಸಿಗುತ್ತೆ. ಅಂತರಿಕ ಮತ್ತು ಶಾರೀರಿಕ ಎರಡನ್ನು ಚೆನ್ನಾಗಿ ನೋಡ್ಕೋಬೇಕು. 

ಅಜ್ಜ ನೀವು ಎಲ್ಲಿವರೆಗೂ ಓದಿದ್ದೀರ ಅಂತ ಕೇಳಿದಕ್ಕೆ ಹೇಳಿದ್ದು ನನ್ನ ಅಪ್ಪನ ಅಪ್ಪ ನನಗೆ ಕಲಿಸಿರುವ ತನಕ ನಾನು ಓದಿದ್ದೇನೆ ಅಂತ ಹೇಳಿದರು, ಆದರೆ ಅದು ನನಗೆ ಸರಿಯಾಗಿ ಅರ್ಥವಾಗಲಿಲ್ಲ ಇದನ್ನು ಅರಿತ ಅಜ್ಜ, ನನಗೆ ಹೀಗೆ ಬಿಡಿಸಿ ಹೇಳಿದ್ರು. 

ನೀತಿ ಕಲಿತದ್ದು - ನೀತಿ ಕಥೆಗಳಿಂದ, 
ಜೀವನ ಕಲಿತದ್ದು - ಅಜ್ಜನಿಂದ. 
ಧರ್ಮ ಕಲಿತದ್ದು - ಅಜ್ಜಿಯಿಂದ 
ಕೆಲಸ ಕಲಿತದ್ದು - ಅಪ್ಪನಿಂದ 
ತಾಳ್ಮೆ ಕಲಿತದ್ದು - ಅಮ್ಮನಿಂದ. 
ಸಂಸ್ಕೃತಿ ಕಲಿತದ್ದು - ಹಕ್ಕಿಗಳಿಂದ. 
ನಿಯತ್ತು ಕಲಿತದ್ದು - ಪ್ರಾಣಿಗಳಿಂದ. 
ಕೂಡಿ ಬಾಳಿದ್ದು - ಗೆಳೆಯರಿಂದ. 

ನೋಡು ಮಗ ಕಲಿಬೇಕು ಅನ್ನೋನು, ಕಲ್ಲಿಂದ ಕೂಡ ಪಾಠ ಕಲಿತಾನೆ ಅದನ್ನ ಯಾರು ಹೇಳೋ ಅಗತ್ಯ ಇಲ್ಲ, ಆದ್ರೆ ಕಲಿಯೋಕೆ ಇಷ್ಟ ಇಲ್ದೆ ಇರೋರನ್ನ ಬೃಹಸ್ಪತಿ ಕಲಿಸೋಕೆ ಪ್ರಯತ್ನ ಪಟ್ರು ಆಗೋಲ್ಲ. 
ಜೀವನ ಕಲಿ - ನಿನ್ನ ವೃತ್ತಿ ಧರ್ಮ ಪಾಲಿಸು, 
ನೋಯಿಸಬೇಡ - ನೆಮ್ಮದಿಯಾಗಿರು, 
ಕಷ್ಟ ಬರಲಿ - ತಂದೆ ತಾಯಿನ ಕಾಪಾಡು, 
ವಿವೇಕ ಬೆಳೆಸ್ಕೋ - ಮಾನವೀಯತೆ ಕಾಪಾಡು, 
ಹೃದಯವಂತಿಕೆ ಇರಲಿ - ಸತ್ತಮೇಲೆ ದೇಹನ ದಾನಮಾಡು. 

ಜೀವ ಇರೋವಾಗ ಯಾರಿಗೆ ಉಪಯೋಗ ಅಗ್ತಿವೋ ಯಾರಿಗೂ ಗೊತ್ತಿಲ್ಲ, ಆದ್ರೆ ಸತ್ಮೇಲೆ ಮಾತ್ರ ಪ್ರತಿಯೊಬ್ಬರೂ ಉಪಯೋಗಕ್ಕೆ ಬರ್ತಿವಿ ಅದು ನಮ್ಮ ದೇಹವನ್ನು ದಾನಮಾಡಿದಾಗ. 

 - ಇಂತಿ ನಿಮ್ಮ ಪ್ರೀತಿಯ ಗೆಳೆಯ. 
ಮಂಜುನಾಥ ಗೌಡ.

No comments:

Post a Comment