Thursday, 20 September 2012

ಮೂರು ಕಥೆ - ಒಂದೇ ಅರ್ಥ

ನಮಸ್ಕಾರ ಗೆಳೆಯರೇ.

ನಿಮಗೆ ನಾನು ಒಂದೇ ಅರ್ಥವನ್ನು ಹೇಳುವ ಮೂರು ಸಣ್ಣ ಕಥೆಗಳನ್ನು ಬರೆಯುತ್ತಿದ್ದೇನೆ.

ಒಂದನೇಯ ಕಥೆ :  

ಬೇಸಿಗೆ ಮುಗಿದರು ನಮ್ಮ ಹಳ್ಳಿಯ ಜನ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದರು, ಮಳೆಗಾಲದಲ್ಲೂ ಮಳೆಯಿಲ್ಲದೆ ಜನ ದೇವರ ಮೊರೆಹೋದರು, ಮಳೆ ಬರಲೆಂದು ಪ್ರಾರ್ಥಿಸಲು. ಹಳ್ಳಿಯ ಜನರೆಲ್ಲರೂ ಪೂಜೆ ಸಾಮಗ್ರಿಗಳೊಂದಿಗೆ ದೇವಾಲಯಕ್ಕೆ ಬಂದರು, ಆದರೆ ಅದೇ ಹಳ್ಳಿಯ ಒಬ್ಬ ಸಣ್ಣ ಹುಡುಗ ಮಾತ್ರ ಒಂದು ಕೊಡೆ (ಛತ್ರಿ)ಯೊಂದಿಗೆ ಬಂದ. ದೇವರು ಮಳೆಯನ್ನೂ ಬರಿಸುತಾನೆ ಎನ್ನುವ ಬಲವಾದ ನಂಬಿಕೆಯೊಂದಿಗೆ.




ಎರಡನೇಯ ಕಥೆ :
ಒಬ್ಬ ತಂದೆ ತನ್ನ ಒಂದು ವರ್ಷದ ಮಗುವನ್ನು ಪ್ರತಿಬಾರಿಯೂ ಗಾಳಿಯಲ್ಲಿ ಮೇಲಕ್ಕೆ ಎಸೆಯುವಾಗ ಅದು ಪ್ರತಿಬಾರಿಯೂ ನಗುತ್ತದೆ. ಕಾರಣ ನನ್ನ ತಂದೆ ಪ್ರತಿಬಾರಿಯೂ ತನ್ನನ್ನು ಕೆಳಗೆ ಬೀಳದಂತೆ ಹಿಡಿದುಕೊಳ್ಳುತ್ತಾನೆ ಎನುವ ಬಲವಾದ ನಂಬಿಕೆ.







ಮೂರನೇಯ ಕಥೆ :
ನಾವು ರಾತ್ರಿ ಮಲಗಿದಾಗ ಬೆಳಗ್ಗೆ ಏಳುವುದನ್ನು ಖಚಿತ ಪಡಿಸಲು ಸಾಧ್ಯವೇ ಇಲ್ಲ ಕಾರಣ ಭವಿಷ್ಯ ಕಾಲ ತುಂಬಾ ನಿಗೂಡ, ಅದನ್ನು ಆ ಭಗವಂತ ರಹಸ್ಯವಾಗಿಯೇ ಉಳಿಸಿದ್ದಾನೆ, ಆದರು ನಾವು ರಾತ್ರಿ ಮಲಗುವಾಗ ನಮ್ಮನ್ನು ಎಬ್ಬಿಸುವ ಕರೆ ಘಂಟೆಯನ್ನು ಗಡಿಯಾರದಲ್ಲಿ ಅಳವಡಿಸಿ ನಂತರ ಮಲಗುತ್ತೇವೆ, ಏಕೆಂದರೆ ನಮ್ಮ ಜೀವನ ಮತ್ತೆ ಪ್ರಾರಂಭಿಸಲು.





ಅರ್ಥ : ಭಕ್ತಿ, ರಕ್ಷಣೆ ಮತ್ತು ಶಿಸ್ತು ಈ ಮೂರು ಜೀವನದ ಅಂಶಗಳು ನಂಬಿಕೆಯ ಕಂಬದ ಆಧಾರದ ಮೇಲೆ ನಿಂತಿವೆ.


- ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.

No comments:

Post a Comment