ನಮಸ್ಕಾರ ಗೆಳೆಯರೇ.zzzzzzzzzzzzನಿಮ್ಮ ಎಲ್ಲರಿಗೂ "ಆಮೆ ಮತ್ತು ಮೊಲ"ದ ಕಥೆ ಗೊತ್ತೇ ಇದೆ ಅದರಲ್ಲಿ ಮೊಲ ತನ್ನ ಅಹಂಕಾರದಿಂದ ಆಮೆಯ ಎದುರು ಸೋತು ಸುಣ್ಣವಾಗಿದ್ದು. ಅದರ ಮುಂದುವರೆದ ಬಾಗ ಈಗ ಪ್ರಕಟಿಸುತ್ತಿದ್ದೇನೆ.
ಈಗಿನ ಪೀಳಿಗೆ ಮಕ್ಕಳು ತುಂಬಾ ಬುದ್ದಿವಂತರು ಮತ್ತು ಹೆಚ್ಚು ಆಲೋಚಿಸುವ ಶಕ್ತಿಯುಳ್ಳವರು, ಇದು ನನಗೆ ಪ್ರಾಯೋಗಿಕವಾಗಿ ತಿಳಿದು ಬಂದಿದ್ದು ನನ್ನ ಓರ್ವ ಗೆಳೆಯನ ಮಗಳಿಗೆ ಈ "ಆಮೆ ಮತ್ತು ಮೊಲ"ದ ಕಥೆಯನ್ನು ಹೇಳಿದ ಕಥೆ ಮುಗಿದ ಕೂಡಲೇ ಆ ೩ ವರ್ಷದ ಮಗು ನನಗೆ ಕೇಳಿದ ಪ್ರಶ್ನೆ ಮಾಮ ಆ ಆಮೆ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೆ ಇನ್ನು ಬೇಗ ಗುರಿ ಮುಟ್ಟುತ್ತಿತ್ತು ಅಲ್ವ ಎಂದು ಕೇಳಿತು. ನಾನಾಗ ಅಂದುಕೊಂಡ ಅಬ್ಬಾ...!! ಈ ಪೀಳಿಗೆಯ ಮಕ್ಕಳೇ ಇಷ್ಟು ಆಲೋಚಿಸ ಬೇಕಾದರೆ ಇನ್ನು ಮುಂದಿನ ಪೀಳಿಗೆಯ ಮಕ್ಕಳು ಪ್ರಳಯಾಂತಕರೆ ಹೌದು.ಆಮೆ ಮತ್ತು ಮೊಲದ ಕಥೆ ಮುಂದು ವರೆದ ಬಾಗ....
ಮೊಲ
ಓಟದಲ್ಲಿ ಸೋತ ನಂತರ ಈ ಸೋಲು ನುಂಗಲಾಗದ ತುತ್ತಾಗಿ ಪರಿಣಮಿಸಿತು, ಅಮೆಗೆ ಸರಿಯಾದ ಪಾಠ
ಕಲಿಸಲು ಸಮಯಕ್ಕಾಗಿ ಕಾತು ತನ್ನ ಮರಿ ಮೂಲವನ್ನು ಓಟಕ್ಕೆ ತಯ್ಯಾರು ಮಾಡಲು ತನ್ನನ್ನು
ತಾನು ತೊಡಗಿಸಿಕೊಂಡಿತು. ಇತ್ತ ಆಮೆಯು ಕೂಡ ಸುಮನ್ನೇ ಇರದೇ ಮೊಲದ ತಂತ್ರಕ್ಕೆ
ಪ್ರತಿತಂತ್ರ ಹೆಣೆಯಲು ಸಜ್ಜಾಗುತ್ತಿತ್ತು. ಕಾಲ ಕಳೆದಂತೆ "ಆಮೆ ಮತ್ತು ಮೊಲ"ದ ಮರಿಗಳು
ಓಟಕ್ಕೆ ತಯಾರಾದವು. ಕಾಡಿನಲ್ಲಿ ಮತ್ತು ಕುತೂಹಲ ಮನೆ ಮಾಡಿತು, ಓಟದ ದಿನವು
ನಿಗದಿಯಾಯಿತು.ನರಿ ತೀರ್ಪುಗಾರನಾಗಿ ಓಟದ ಮಾರ್ಗವನ್ನು ತಿಳಿಸಿ ಓಟ ಪ್ರಾರಂಭಿಸಲು ಹೇಳಿತು. ಓಟ ಶುರುವಾದಂತೆ ಮೊಲ ಚಂಗನೆ ನೆಗೆದು ನೋಡ-ನೋಡುತ್ತಿದ್ದಂತೆ ವೇಗವಾಗಿ ಓದಲು ಪ್ರಾರಂಭಿಸಿತು. ಆದರೆ ಆಮೆ ಓಡುವ ಬದಲಾಗಿ ಹಾರುತ್ತಿತ್ತು. ಇದನ್ನು ಕಂಡ ಮೊಲ ಮೂರ್ಚೆಹೋಯಿತು, ಆಮೆ ಗುರಿ ತಲುಪಿತು ಮೊಲ ಬಂದ ದಾರಿಗೆ ಸುಂಖವಿಲ್ಲ ಎಂದು ಸುಮ್ಮನೆ ಹಿಂದಿರುಗಿತು.
ನೀತಿ : ಸೋಲಿಸೋಕೆ ದಾರಿ ಹುಡುಕುವವರನ್ನು ಗೆಲ್ಲೋಕೆ ಅಂತ ಹಲವರು ಇರ್ತಾರೆ.
- ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.
No comments:
Post a Comment