Wednesday, 26 September 2012

ಪುರಾತನ ಕನ್ನಡ ಅಧುನಿಕ ಕನ್ನಡಿಗ.





ನಮಸ್ಕಾರ ಗೆಳೆಯರೇ,

ನಾವು ಕನ್ನಡಿಗರು ಮೂಲ ಕರ್ನಾಟಕದವರು, ಕನ್ನಡಿಗರು ವಿಶಾಲ ಮನೋಭಾವದವರು ಎಂದೆಲ್ಲ ಹೇಳುವ ನಾವು. ಅನ್ಯ ಭಾಷಿಗರೊಂದಿಗೆ ಕನ್ನಡವನ್ನು ಮಾತನಾಡಿ ಅವರಿಗೆ ಕನ್ನಡ ಕಲಿಸುವುದಿಲ್ಲ. ನಾವೇ ಅವರ ಭಾಷೆಯನ್ನೂ ಕಲಿತು ಅವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವ ಹುಮ್ಮಸ್ಸು ತೋರುತ್ತೇವೆ.

ನಮ್ಮ ಭಾಷೆಯ ಹಿರಿಮೆ ಏನೆಂದು ನಮಗೆ ತಿಳಿದಿಲ್ಲ. ನನಗೆ ಎಷ್ಟೋಜನ ಹಿರಿಯರು ಹೇಳಿದ್ದರು, ತಮಿಳರದ್ದು ದುರಾಭಿಮಾನ, ಮಳಿಯಾಳಿಗಳದ್ದು ಶೃಂಗಾರಾಭಿಮಾನ, ತೆಲುಗಿನರದ್ದು ಅಭಿಮಾನ, ಕನ್ನಡಿಗರದ್ದು ನಿರಭಿಮಾನ. ಯಾಕೆಂದರೆ ನಮ್ಮ ಕನ್ನಡಿಗರಿಗೆ ಭಾಷೆ ಎಂದರೆ ಅದು ಒಂದು ಸಂಸ್ಕೃತಿ ಅನ್ನೋದೇ ಮರೆತು ಹೋಗಿದೆ. ನಮ್ಮ ಕವಿಗಳು ಕನ್ನಡ ನಾಡು, ನುಡಿ, ಜಲ ಅರಣ್ಯ, ಸಹ್ಯಾದ್ರಿಯ ಕುರಿತು ಎಷ್ಟೆಲ್ಲಾ ಹಾಡಿ ಹೊಗಳಿದ್ದಾರೆ, ಎಂದು ಇಲ್ಲಿರುವ ಹಾಡನ್ನು ಒಮ್ಮೆ ಕೇಳಿ.

 "ಹಲ್ಮಿಡಿ ಶಾಸನ"ದ ಆಧಾರದ ಮೇಲೆ ನಮ್ಮ ಕನ್ನಡ ೧೭೦೦ ವರ್ಷಗಳಷ್ಟು ಹಳೆಯದು ಅಂತ ಹೇಳುವ ನಾಮಗೆ, "ರೋಥೆರ್ಹಂ ಸಿ. ಮಯೋ" ವಿದೇಶಿ ಪತ್ರಕರ್ತನೊಬ್ಬ ತನ್ನ ದೇಶೀಯ ಪತ್ರಿಕೆಯಲ್ಲಿ ಕನ್ನಡದ ಬಗ್ಗೆ ಹೇಳುವ ತನಕ ನಮಗೆ ತಿಳಿದಿಲ್ಲ, ನಮ್ಮ "ಸಿಂಧೂ ಬಯಲಿನ ನಾಗರೀಕತೆ"ಯ ಜನರು ಕನ್ನಡವನ್ನು ಆಡುಭಾಷೆಯಾಗಿ ಬಳಸುತ್ತಿದ್ದರು ಎಂದು ಕನ್ನಡ ಭಾಷೆ ಸುಮಾರು ೧೦,೦೦೦ ವರ್ಷಗಳಷ್ಟು ಹಳೆಯದು ಎಂದು ತೋರಿಸಿದವರು.
. ಇದಾದ ನಂತರ ನಮ್ಮ ಜನ ಕನ್ನಡದ ಕುರಿತು ಅಧ್ಯಾಯನಕ್ಕಾಗಿ ರಾಜ್ಯ ಸರ್ಕಾರದ ಮೇಲಾಗಲಿ - ಕೇಂದ್ರ ಸರ್ಕಾರದ ಮೇಲಾಗಲಿ ಅಥವಾ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮೇಲಾಗಲಿ ಒತ್ತಡವನ್ನು ಹೇರುವುದಿಲ್ಲ.


ನಮ್ಮ ಕನ್ನಡದ ಭಾಷೆ ವಿಶ್ವದ ಪ್ರಾಚಿನ ಮೂರು ಭಾಷೆಗಳಲ್ಲಿ ಒಂದು ಮತ್ತು ನಮ್ಮ ಕನ್ನಡ ಭಾಷೆ "ಗಿನ್ನಿಸ್" ಪುಸ್ತಕದಲ್ಲಿ ದಾಖಲೆಯಾಗಿದೆ ಎಂದು ನಮಗೆ ತಿಳಿದದ್ದು ವಿಶೇಷಿ ಪತ್ರಿಕೆಯಲ್ಲಿ ಪ್ರಕಟವಾದ ನಂತರ. ಅಂದರೆ ತಿಳಿದುಕೊಳ್ಳಿ ನಮ್ಮ ಕನ್ನಡಿಗರಿಗೆ ಭಾಷಾಭಿಮಾನ ಎಂದರೆ ಏನು ಅಂತ...??

ಒಂದು ಕಾಲದಲ್ಲಿ ಅಖಂಡ ಭಾರತನ್ನೇ ಕರ್ನಾಟಕದ ಗಡಿಯಾಗಿ ಮಾಡಿಕೊಂಡು ಆಳಿದ (ಒಂದನೇ ಗೋವಿದ ವರಮಾನ ಕಾಲದಲ್ಲಿ) ಕನ್ನಡಿಗರು, ಇಂದು ಕರ್ನಾಟಕದ ಗಡಿಗಾಗಿ ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನೊಂದಿಗೆ ಹೋರಾಡಬೇಕಾಗಿದೆ.

ನರ್ಮದ ನದಿಗೆ ಆನೆಗಳನ್ನೇ ಸೇತುವೆಯಾಗಿ ಬಳಸಿ ನಮ್ಮ ಕರ್ನಾಟಕದ ಚಕ್ರವರ್ತಿ ಇಮ್ಮಡಿ ಪುಲಿಕೇಶೀ ಉತ್ತರದ ಹರ್ಷವರ್ಧನನನ್ನು ಸೋಲಿಸಿ "ಕನ್ನಡಿಗರು ಹೇಡಿಗಳಲ್ಲ - ವೀರರು, ಧೀರರು, ಜ್ಞಾನಿ-ವಿಜ್ಞಾನಿಗಳು, ಸುಸಂಸ್ಕೃತರು, ಭಾಷಾಭಿಮಾನಿಗಳು ಮತ್ತು ದೇಶಾಭಿಮಾನಿಗಳು" ಎಂದು ಸ್ನೇಹಕ್ಕೆ ಗುರುತಾಗಿ ಹರ್ಷವರ್ಧನನ ಸಾಮ್ರಾಜ್ಯವನ್ನು ಅವರಿಗೆ ಹಿದಿರುಗಿಸಿದವರು ನಾವು.ಅಂತಹ ಕನ್ನಡಿಗರು ಭಾಷೆಯ ಉಳಿವಿಗಾಗಿ ಹೋರಾಡುವ ಅನಿವಾರ್ಯ ಉಂಟಾಗಿದೆ.

ಭಾರತೀಯ ಸೇನಾಪಡೆಗೆ ಕನ್ನಡಿಗರ ಕೊಡುಗೆ ಅಪಾರ (ಜನರಲ್. ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಕರ್ನಲ್ ವಸಂತ್,) ಇವರು ಕನ್ನಡಿಗರು ಭಾರತ ಸೇನೆಯ ಸಿಂಹಗಳು ಎಂದೇ ಗುರುತಿಸಿಕೊಂಡವರು. ಇವರ ಬಗ್ಗೆ ಎಷ್ಟು ಜನ ಕನ್ನಡಿಗರಿಗೆ ಗೊತ್ತು.

ವಿಮಾನವನ್ನು ಕಂಡು ಹಿಡಿದವರು ಯಾರು ಎಂದು ನಾವು ಯಾವ ಮಕ್ಕಳಿಗೆ ಕೇಳಿದರು ತಕ್ಷಣ ಸಿಗುವ ಉತ್ತರ "ರೈಟಾ ಸಹೋದರರು" ಆದರೆ ನಿಜವಾದ ಸಂಗತಿ ವಿಮಾನವನ್ನು ಕಂಡುಹಿಡಿದವರು ನಮ್ಮ ಕನ್ನಡಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ " ಆನೇಕಲ್ ಸುಬ್ಬ ಶಾಸ್ತ್ರಿ" ಎನ್ನುವ ವಿಜ್ಞಾನಿ. ಈ ಕನ್ನಡಿಗನ ಬಗ್ಗೆ ಎಷ್ಟುಜನ ಕನ್ನಡಿಗರಿಗೆ ಗೊತ್ತು.

ಭಗವಧ್ಗೀತೆಗೆ ಸರಿ-ಸಮ ಎಂದು ಬಿಂಭಿಸುವ ಗ್ರಂಥ "ಮಂಕು ತಿಮ್ಮನ ಕಗ್ಗ" ಇದನ್ನು ಕನಡದ ಭಗವಧ್ಗೀತೆ ಎಂದು ಕರೆಯುವ ಗ್ರಂಥವನ್ನು ಬರೆದವರು ನಮ್ಮ ಡಿ. ವಿ. ಗುಂಡಪ್ಪ (ಡಿ.ವಿ.ಜಿ) ಇವರು ಸಹ ಕನ್ನಡಿಗರೇ.

ವಿಶ್ವದ ಯಾವುದೇ ರಾಜ್ಯಕ್ಕೆ ತನ್ನದೇ ಆದ ನಾಡ ಗೀತೆಯಾಗಲಿ, ರೈತ ಗೀತೆಯಾಗಲಿ ಅಥವಾ ಸಂಸ್ಕೃತಿಯನ್ನು ಬಿಂಭಿಸುವ ಭಾವುಟವಾಗಲಿ ಇಲ್ಲ, ಆದರೆ ಇವೆಲ್ಲ ನಮ್ಮ ಕರುಣೆಯ ನಾಡು ಕರ್ನಾಟಕಕ್ಕೇ ಇದೆ. ಇದು ಕನ್ನಡಿಗನ ಹಿರಿಮೆಗೆ ಒಂದು ಗರಿ.

ಹೀಗೆ ಹೇಳುತಾ ಹೋದರೆ ಕೊನೆ ಇಲ್ಲದ ಬರವಣಿಗೆ ಹಾಗಾಗಿ ಬಿಡುತ್ತದೆ. 

ಇನ್ನು ಸಮಯ ಸಿಕ್ಕಾಗ ಕನ್ನಡದ ಬಗ್ಗೆ ನಿಮಗೆ ತಿಳಿಸುತ್ತೇನೆ.

ಕನ್ನಡ ಉಳಿಯಲು-ಅಳಿಯಲು ಕನ್ನಡಿಗರೇ ಕಾರಣ.

ಕನ್ನಡ ಭಾಷೆಯನ್ನೂ ಕಲಿಯಿರಿ ಕಲಿಸಿರಿ ಉಳಿಸಿರಿ.


ಜೈ ಭುವನೇಶ್ವರಿ.......!!! ಜೈ ಕರ್ನಾಟಕ......!!

 - ಮುಂದುವರೆಯುತ್ತದೆ.


 - ಇಂತಿ ನಿಮ್ಮ ಪ್ರೀತಿಯ ಗೆಳೆಯ.

ಮಂಜುನಾಥ ಗೌಡ





No comments:

Post a Comment