Thursday, 13 September 2012

ಈ ಪ್ರಪಂಚ ಇರೋದೇ ಹೀಗೆ.

ನಮಸ್ಕಾರ ಗೆಳೆಯರೇ.

ಯೋಗದಲ್ಲಿ ಅತಿ ಮುಖ್ಯವಾದುದು ಆರೋಗ್ಯ ಇದನ್ನು "ಸಿದ್ದ ಸಮಾದಿ ಯೋಗ" ಎಂದು ಕರೆಯುತ್ತಾರೆ, ಇದರ ಸಂಸ್ಥಾಪಕರು " ಶ್ರೀ ಋಷಿ ಪ್ರಭಾಕರ ಗುರೂಜಿ". ಇವರ ಅನುಯಾಯಿಗಳಾದ "ಶ್ರೀ ಸಂಪಂಗಿ ಗುರೂಜಿ " ಇವರು ಹೇಳಿದ ಕಥೆ " ಈ ಪ್ರಪಂಚ ಇರೋದೇ ಹೀಗೆ".

ಒಂದು ದಿನ ಒಬ್ಬ ಮೀನುಗಾರ ಮೀನು ಹಿಡಿಯಲು ನದಿಗೆ ಹೋಗಿ ನದಿಯಲ್ಲಿ ತಾನು ತಂದಿದ್ದ ಬಲೆಯನ್ನು ಹರಡಿ ಮತ್ತೆ ಮನೆಗೆ ವಾಪಸ್ಸಾದ, ಕೆಲವೇ ಸಮಯದ ನಂತರ ಆ ಬಲೆಯಲ್ಲಿ ಒಂದು ಮೊಸಳೆ ಸಿಕ್ಕಿ ಹಾಕಿಕೊಂಡಿತು. ತಾನು ಹೊರ ಬರಲಾರದೆ
ಜೋರಾಗಿ ಕೂಗಿಕೊಳ್ಳುತಿತ್ತು. ಅದೇ ದಾರಿಯಲ್ಲಿ ಹೋಗುತಿದ್ದ ಒಬ್ಬ ಹುಡುಗ ಆ ಕೂಗನ್ನು ಕೇಳಿಸಿಕೊಂಡ ಅವನು ನದಿ ದಡಕ್ಕೆ ದಾವಿಸಿದ. ಆ ಹುಡುಗನನ್ನು ಕಂಡ ಮೊಸಳೆ ತನ್ನನು ಕಾಪಾಡು ಎಂದು ಕಣ್ಣೀರಿಡುತ್ತಾ ಬೇಡಿಕೊಂಡಿತು, ಅದರ ಕಣ್ಣೀರಿಗೆ ಮರುಗಿದ ಹುಡುಗ ಅದನ್ನು ಬಿಡಿಸಿದ. ಮೊಸಳೆ ಆ ಹುಡುಗನಿಗೆ ಧನ್ಯವಾದ ಹೇಳಿ ಅವನ ಕೈಯನ್ನು ಹಿಡಿದುಕೊಂಡು ನನಗೆ ತುಂಬಾ ಹಸಿವಾಗಿದೆ, ಅದ್ದರಿಂದ ನಿನ್ನನು ತಿನ್ನುತ್ತೇನೆ ಎಂದು ಹೇಳಿತು. ಆ ಮೊಸಳೆಯ ಮಾತಿಗೆ ಹೆದರಿದ ಹುಡುಗ ನೀನು ಮಾಡುವುದು ತಪ್ಪು. ನನ್ನನ್ನು ಬಿಟ್ಟು ಬಿಡು ನಾನು ನನ್ನ ತಾಯಿಯ ಬಳಿಗೆ ಹೋಗಬೇಕು ಎಂದು ಕೇಳಿಕೊಂಡರು ಅದು ಬಿಡದೆ ಹಠಮಾಡಿತು ಕೊನೆಗೆ, ಆ ಹುಡುಗ ಉಪಾಯ ಮಾಡಿ ಸರಿ ಹಾಗಾದರೆ ಹೀಗೆ ಮಾಡೋಣ ಮೊದಲು ನಾವು ಮೂರು ಜನರಲ್ಲಿ ನ್ಯಾಯ ಕೇಳೋಣ ಅವರ ತೀರ್ಪಿನಂತೆ ನಡೆದುಕೊಳ್ಳೋಣ ಎಂದು, ಇದಕ್ಕೆ ಮೊಸಳೆ ಒಪ್ಪಿ ಕೊಂದಿತು.

ಮೊದಲು ಒಂದು ತೋಳದ ಬಳಿಗೆ ಬಂದು ನಡೆದುದ್ದನೆಲ್ಲ ವಿವರಿಸಿ ಹೇಳಿದಾಗ, ಆ ತೋಳ  ಮೊಸಳೆಯ ಪರವಾಗಿ ತೀರ್ಪನ್ನು ನೀಡಿ ಹೀಗೆ ಹೇಳಿತು ಮೊಸಳೆ ಮಾಂಸಹಾರಿ ಅದು ನಿನ್ನನ್ನು ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು.

ಎರಡನೆಯದಾಗಿ ಒಂದು ಸಿಂಹದ ಬಳಿದೆ ಹೋಗಿ ನಡೆದುದ್ದನೆಲ್ಲ ಹೇಳಿ, ತನಗೆ ನ್ಯಾಯ ಕೊಡಿ ಎಂದು ಆ ಹುಡುಗ ಅಂಗಲಾಚಿ ಬೇಡಿಕೊಂಡ, ಆದರೆ ಅ ಸಿಂಹ ಕೂಡ ಅವನಿಗೆ ವಿರುದ್ದವಾಗಿ ತೀರ್ಪನ್ನು ನೀಡಿ ಹೀಗೆ ಹೇಳಿತು, ಬಳಶಾಲಿಗಳಿಗೆ ಈ ಪ್ರಕೃತಿಯ ಪ್ರತಿಯೊಂದು ವಸ್ತುವಿನಮೇಲೆ ಅದಿಕಾರವಿದೆ ಎಂದು.

ಮೂರನೆಯದಾಗಿ ಒಂದು ಮೊಲದ ಬಳಿ ಬಂದು ನಡೆದುದ್ದನೆಲ್ಲ ವಿವರಿಸಿ ನ್ಯಾಯ ಕೇಳಿದಾಗ, ಆ ಮೊಲ ಮೊಸಳೆ ಮತ್ತು ಹುಡುಗನನ್ನು ಕುರಿತು ಹೀಗೆ ಹೇಳಿತು ನನಗೆ ಕಿವಿ ಸ್ವಲ್ಪ ಮಂದವಾಗಿದೆ ಆದ್ದರಿಂದ ನೀವು ನನಗೆ ಪ್ರಾಯೋಗಿಕವಾಗಿ ತೋರಿಸಿ ಆಗ ಮಾತ್ರ ನಾನು ತೀರ್ಪನ್ನು ಕೊಡಲು ಸಾಧ್ಯ ಎಂದಿದು, ಅದರಂತೆ ಮೂರು ಜನ ನದಿ ದಡಕ್ಕೆ ಬಂದರು ಮೊಸಳೆ ಮತ್ತೆ ನೀರಿಗೆ ಇಳಿಯಿತು, ಆ ಹುಡುಗ ಬಲೆಯನ್ನು ಹಾಕಿ ಮೂಲ ಸ್ಥಿತಿಗೆ ತಂದು ಮೊಸಳೆಯನ್ನು ಬಲೆಯಲ್ಲಿ ಸಿಕ್ಕಿಸಿದ. ಮೊಸಳೆಯನ್ನು ಬಲೆಯಿಂದ
ಬಿಡಿಸಬೇಡ ಎಂದು ಮೊಲ ಆ ಹುಡುಗನಿಗೆ ಹೇಳಿ, ನೋಡು ಮಗು ಈ ಪ್ರಪಂಚ ಇರೋದೇ ಹೀಗೆ. ಅದಕ್ಕೆ ನಾವು ದುಷ್ಟರನ್ನು ಕಂಡರೆ ದೂರ ಇರಬೇಕು ಅಂತ ಹೇಳೋದು, ಇನ್ನು ನಿನ್ನ ದಾರಿ ನೀನು ಹಿಡಿ, ನಾನು ದಾರಿಗೆ ನಾನು ಹೋಗುತ್ತೇನೆ ಎಂದು ನದಿ ದಡವನ್ನು ತೋರೆದವು.

    "ಯಾರಾದರು ಅಪಾಯದಲ್ಲಿದರೆ ಕಾಪಾಡುವ ಮುನ್ನ ಒಮ್ಮೆ ಆಲೋಚಿಸಿ ಮುಂದುವರೆಯಿರಿ"

 
 - ಇಂತಿ ನಿಮ್ಮ ಪ್ರೀತಿಯ ಗೆಳೆಯ
ಮಂಜುನಾಥ ಗೌಡ.





No comments:

Post a Comment