ನಮಸ್ಕಾರ ಗೆಳೆಯರೇ.
ಈ ಜೀವನ ಅನ್ನೋದು, ಕಳೆದು ಹೋದ ನೆನ್ನೆ ಮತ್ತು ಬರಬಹುದಾದ ನಾಳೆ ಎನ್ನುವುದರ ಸಂಘರ್ಷ...
ನಾವು ಚಿಕ್ಕವರಾಗಿದ್ದಾಗ ನಾವು ನಮ್ಮ ತಂದೆ-ತಾಯಿಯರ ಬೆನ್ನಮೇಲೆ ಕೂತು ಜಾತ್ರೆ ನೋಡಿದ ನೆನಪು. ಆ ನೆನಪುಗಳು ನಮ್ಮ ಬಾಲ್ಯದ ಅಮೂಲ್ಯ ಮುತ್ತುಗಳು. ಜೇನಿನ ಹನಿ ಸಾಗರವಾಗಿ ಹರಿಯುವಂತಹ ನೆನಪುಗಳು, ಈಗ ಬತ್ತಿ
ಬರಿದಾಗಿದೆ. ಆ ಸಾಗರದ ಅಲೆಗಳು ಈಗ ಮೌನವಾಗಿದೆ.
ಈಗ ಕಾಲ ಬದಲಾಗಿದೆ, ಜೀವನದ ಶೈಲಿ ಬದಲಾಗಿದೆ, ಪ್ರತಿದಿನ ಜೀವನದ ಮೂಲ್ಯ ಕಳೆದು ಹೋಗುತ್ತಿದೆ. ಸಂಭಂದಗಳ ನಡುವೆ ನಮ್ಮ ತಂದೆ-ತಾಯಿ ನಮ್ಮನ್ನು ಹೇಗೆ ಬೆಳೆಸಿದ್ದಾರೆ,,,, ಆದರೆ ನಾವು ಅವರನ್ನ ಹೇಗೆ ನಡೆಸಿ ಕೋಳ್ತಾ ಇದ್ದೇವೆ....??? ಅನ್ನೋ ಒಂದು ಸಣ್ಣ ಪಾಪಪ್ರಜ್ಞೆ ಕೂಡ ನಮ್ಮಲ್ಲಿ ಉಳಿದಿಲ್ಲ.
ತಂದೆ ಮುಖದಲ್ಲಿ ದೇವರನ್ನಾ
ಮತ್ತು ತಾಯಿ ಪಾದದಲ್ಲಿ ಸ್ವರ್ಗ ಕಣೋ ಅಂತ ಕಾಲ ಅದು, ಆದರೆ ಈಗ ಜನ ಅದನ್ನ
ಮರೆತು ಪ್ರತಿ ವಿಷಯವನ್ನು ಪ್ರಯೋಗದ ಮೂಲಕ ಅಳಿತಾರೆ, ತಂದೆ ತಾಯಿ ತಾವು "ಬೆವರು ಸುರಿಸಿ ಕಷ್ಟಪಟ್ಟು ಗಳಿಸಿದ ಹಣವನ್ನು ತಮ್ಮ ಮಕ್ಕಳ ಏಳಿಗೆಗೆ, ಸಂತೋಷಕ್ಕೆ ಖರ್ಚು ಮಾಡೊವಾಗ, ಅದೆ ಮಕ್ಳು ತನ್ನ ತಂದೆ ತಾಯಿಗೆ ವಯಸ್ಸಾದಾಗ ಅವರ ಸಂತೋಷಕ್ಕೆ ಯಾಕೆ ಖರ್ಚು ಮಾಡೊದಿಲ್ಲ....
ಒಬ್ಬ ಮಗ ತನ್ನ ಮೊದಲನೆ ಹೆಜ್ಜೆ ಇಡೊವಾಗ ತನ್ನ ತಂದೆ-ತಾಯಿ ಸಹಾಯ ಪಡಿಬೆಕಾದ್ರೆ, ತಂದೆ-ತಾಯಿ ತಮ್ಮ ಜೀವನದ ಕೊನೆ ಹೆಜ್ಜೆ ಇಡೊವಾಗ ಯಾಕೆ ನಿರ್ಲಕ್ಷ್ಯ ತೊರಿಸ್ತಾನೆ...
ಜೀವನವೆಂಬ ಸಾಗರದಲ್ಲಿ ಎಲ್ಲಾ ತಂದೆ-ತಾಯಂದಿರು ತಮ್ಮ ಮಕ್ಕಳನ್ನ ದಡ ಸೇರಿಸೊ ಹಂಬಲದಲ್ಲಿ ತಾವೆ ಆ ಸಗರದ ತಳ ಸೇರಿರ್ತಾರೆ....
- ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.
ಮಂಜುನಾಥ ಗೌಡ.


No comments:
Post a Comment